Publish Date: Sun, 06 Dec 2020 (09:04 IST)
Updated Date: Sun, 06 Dec 2020 (09:06 IST)
ಸಿಡ್ನಿ: ಮೊದಲ ಟಿ20 ಪಂದ್ಯ ಗೆದ್ದು ಉತ್ಸಾಹದಲ್ಲಿರುವ ಟೀಂ ಇಂಡಿಯಾ ಇಂದು ದ್ವಿತೀಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಏಕದಿನ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಆಡಿದ್ದ ಟೀಂ ಇಂಡಿಯಾಗೆ ಗೆಲುವು ಮರೀಚಿಕೆಯಾಗಿತ್ತು. ಕೊನೆಯ ಪಂದ್ಯದಲ್ಲಿ ಮಾತ್ರ ಮೊದಲು ಬ್ಯಾಟಿಂಗ್ ಮಾಡಿ ಪ್ರಯಾಸಕರ ಗೆಲುವು ಕಂಡಿತ್ತು. ಈಗ ಟಿ20 ಪಂದ್ಯದಲ್ಲೂ ಅದೇ ರೀತಿ ರನ್ ಹೊಳೆ ಹರಿಯುವುದು ಗ್ಯಾರಂಟಿ. ಹೀಗಾಗಿ ಇಲ್ಲಿ ಟಾಸ್ ಪ್ರಧಾನ ಪಾತ್ರವಹಿಸಲಿದೆ. ಇಂದಿನ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.40 ಕ್ಕೆ ಆರಂಭವಾಗಲಿದೆ.