Publish Date: Sun, 06 Dec 2020 (13:26 IST)
Updated Date: Sun, 06 Dec 2020 (13:27 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಮೊದಲ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸರಣಿ ಕೈವಶವಾಗಲಿದೆ. ಇಂದಿನ ಪಂದ್ಯಕ್ಕೆ ಭಾರತ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಜಡೇಜಾ ಸ್ಥಾನಕ್ಕೆ ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ ಸ್ಥಾನದಲ್ಲಿ ಶ್ರಾದ್ಧೂಲ್ ಠಾಕೂರ್, ಮನೀಶ್ ಪಾಂಡೆ ಸ್ಥಾನಕ್ಕೆ ಶ್ರೇಯಸ್ ಐಯರ್ ಗೆ ಅವಕಾಶ ನೀಡಲಾಗಿದೆ. ಅತ್ತ ಆಸ್ಟ್ರೇಲಿಯಾ ನಾಯಕ ಏರಾನ್ ಫಿಂಚ್ ಗಾಯದ ಕಾರಣದಿಂದ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಸ್ಥಾನದಲ್ಲಿ ಮ್ಯಾಥ್ಯೂ ವೇಡ್ ತಂಡವನ್ನು ಮುನ್ನಡೆಸಲಿದ್ದಾರೆ.
Krishnaveni K
Publish Date: Sun, 06 Dec 2020 (13:26 IST)
Updated Date: Sun, 06 Dec 2020 (13:27 IST)