Publish Date: Sat, 15 Dec 2018 (09:35 IST)
Updated Date: Sat, 15 Dec 2018 (15:46 IST)
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಬ್ಬರೂ ಆಟಗಾರರು ಮೈದಾನದಲ್ಲಿ ಕಿತ್ತಾಡಿಕೊಂಡಿದ್ದು ಕ್ರಿಕೆಟ್ ಪ್ರಿಯರಿಗೆ ಇಂದಿಗೂ ನೆನಪಿದೆ.
ಇಂತಿಪ್ಪ ಗಂಭೀರ್ ಇದೀಗ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದು, ಕೊಹ್ಲಿ ಮೇಲಿನ ಹಳೆಯ ಹಗೆತನವನ್ನು ಮತ್ತೆ ತೋರ್ಪಡಿಸಿದ್ದಾರೆ. ಕೊಹ್ಲಿ ಶ್ರೇಷ್ಠ ನಾಯಕನಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
‘ಸಾಕಷ್ಟು ರನ್ ಗಳಿಸಿದ ಮಾತ್ರಕ್ಕೆ ಒಬ್ಬ ಕ್ರಿಕೆಟಿಗ ಶ್ರೇಷ್ಠ ನಾಯಕನಾಗಲು ಸಾಧ್ಯವಿಲ್ಲ’ ಎಂದು ಗಂಭೀರ್ ಕೊಹ್ಲಿ ಬಗ್ಗೆ ಲೇವಡಿ ಮಾಡಿದ್ದಾರೆ. ಕೊಹ್ಲಿ ಟೀಂ ಇಂಡಿಯಾದ ಸರ್ವಶ್ರೇಷ್ಠ ನಾಯಕ ಎಂಬ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಗಂಭೀರ್ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ಮೊದಲು ಧೋನಿ ನಾಯಕತ್ವದ ಬಗ್ಗೆಯೂ ಗಂಭೀರ್ ಲೇವಡಿ ಮಾಡಿದ್ದರು. ಇದೀಗ ಕೊಹ್ಲಿ ವಿರುದ್ಧ ಅಸಮಾಧಾನ ತೋರಿಸಿದ್ದಾರೆ. ಅಂತೂ ನಿವೃತ್ತಿಯಾದ ಮೇಲೆ ಗಂಭೀರ್ ತಮ್ಮ ವೃತ್ತಿ ಜೀವನದಲ್ಲಿ ತಮಗಿದ್ದ ಅಸಮಾಧಾನಗಳನ್ನೆಲ್ಲಾ ಹೊರ ಹಾಕುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ