Publish Date: Thu, 30 Aug 2018 (09:17 IST)
Updated Date: Thu, 30 Aug 2018 (09:19 IST)
ಸೌಥಾಂಪ್ಟನ್: ಇಲ್ಲಿ ಇಂದಿನಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ.
ಮೂರನೇ ಟೆಸ್ಟ್ ನಲ್ಲಿ ಗಾಯಾಳುವಾಗಿ ಸರಿಯಾಗಿ ಬೌಲಿಂಗ್ ಮಾಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಫಿಟ್ ನೆಸ್ ಬಗ್ಗೆ ಟೀಂ ಇಂಡಿಯಾಗೆ ಆತಂಕವಿತ್ತು. ಆದರೆ ಇದೀಗ ಅಶ್ವಿನ್ ನೆಟ್ಸ್ ನಲ್ಲಿ ಮತ್ತೆ ಬೌಲಿಂಗ್ ಮಾಡಿದ್ದು, ಆತಂಕ ದೂರ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಎಲ್ಲರೂ ವಿಫಲರಾಗುತ್ತಿದ್ದರೆ ಅಶ್ವಿನ್ ಮಾತ್ರ ಯಶಸ್ವಿಯಾಗಿ ಬೌಲಿಂಗ್ ಮಾಡಿದ್ದರು. ಹೀಗಾಗಿ ಅವರ ಫಿಟ್ನೆಸ್ ಟೀಂ ಇಂಡಿಯಾಗೆ ಪ್ರಮುಖವಾಗಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಅಂತಹ ಬದಲಾವಣೆಯೇನೂ ಆಗುವ ಸಾಧ್ಯತೆ ಕಡಿಮೆ. ಕಳೆದ ಪಂದ್ಯದಲ್ಲಿ ಗೆದ್ದ ತಂಡವನ್ನೇ ನಾಯಕ ವಿರಾಟ್ ಕೊಹ್ಲಿ ಇಂದು ಕಣಕ್ಕಿಳಿಸುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.