Publish Date: Tue, 09 Apr 2019 (09:29 IST)
Updated Date: Tue, 09 Apr 2019 (09:31 IST)
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತಿರುವ ಅಭಿಮಾನಿಗಳು ನಾಯಕ ವಿರಾಟ್ ಕೊಹ್ಲಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸುತ್ತಿದ್ದಾರೆ.
ಕೊಹ್ಲಿ ಒಂದೋ ಐಪಿಎಲ್ ಪಂದ್ಯಗಳಿಂದ ವಿಶ್ರಾಂತಿ ಪಡೆಯಲಿ ಅಥವಾ ಆರ್ ಸಿಬಿ ನಾಯಕತ್ವಕ್ಕೆ ರಾಜೀನಾಮೆ ನೀಡಲಿ. ಹಾಗಾದರೂ ತಂಡದ ಗೆಲುವಿಗೆ ಸಹಕರಿಸಿ ಎಂದು ಟ್ವಿಟರಿಗರು ಒತ್ತಾಯಿಸಿದ್ದಾರೆ.
ಇನ್ನು ಕೆಲವರಂತೂ ನಿಜವಾದ ಕೊಹ್ಲಿ ಸ್ವಿಜರ್ ಲ್ಯಾಂಡ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ. ಈಗ ಆಡುತ್ತಿರುವುದು ಡುಪ್ಲಿಕೇಟ್ ಕೊಹ್ಲಿ ಎಂದಿದ್ದಾರೆ. ಇನ್ನು, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡಾ ಕೊಹ್ಲಿ ವಿಶ್ವಕಪ್ ದೃಷ್ಟಿಯಿಂದಲೂ ಈಗ ಐಪಿಎಲ್ ಪಂದ್ಯಗಳಿಗೆ ವಿಶ್ರಾಂತಿ ಪಡೆಯುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನವರು ವಿರಾಟ್ ಉತ್ತಮ ಬ್ಯಾಟ್ಸ್ ಮನ್ ಆಗಿರಬಹುದು. ಆದರೆ ಒಳ್ಳೆಯ ನಾಯಕನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ