Publish Date: Sat, 21 Oct 2017 (07:37 IST)
Updated Date: Sat, 21 Oct 2017 (07:38 IST)
ನವದೆಹಲಿ: ಇತ್ತೀಚೆಗಷ್ಟೇ ಪಟಾಕಿ ಇಲ್ಲದೇ ದೀಪಾವಳಿ ಆಚರಿಸಿ ಎಂದು ಸಲಹೆ ಕೊಟ್ಟ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಅಭಿಮಾನಿಗಳು ತಿರುಗೇಟು ನೀಡಿದ್ದರು. ಇದೀಗ ಟೀಂ ಇಂಡಿಯಾ ನಾಯಕ ಕೊಹ್ಲಿಗೂ ಅದೇ ಗತಿಯಾಗಿದೆ.
ತಮ್ಮ ಟ್ವಿಟರ್ ಪೇಜ್ ನಲ್ಲಿ ಕೊಹ್ಲಿ ದೀಪಾವಳಿಗೆ ‘ದೀಪವಿರಲಿ, ಶಬ್ಧ ಬೇಡ’ ಎಂದು ಪಟಾಕಿ ಹಚ್ಚದಂತೆ ಮನವಿ ಮಾಡಿದ್ದರು. ಈ ಸಂದೇಶ ಓದಿ ಅಭಿಮಾನಿಗಳು ಕೊಹ್ಲಿ ವಿರುದ್ಧ ತಿರುಗಿಬಿದ್ದಿದ್ದಾರೆ.
ನಾವು ನೀವು ಹೇಳಿದ್ದರ ಉಲ್ಟಾ ಮಾಡುತ್ತೇವೆ ಎಂದು ಕೆಲವರು ಹೇಳಿದರೆ ಇದು ಭಾರತೀಯ ಸಂಸ್ಕೃತಿ, ಐಪಿಎಲ್ ಕ್ರಿಕೆಟ್ ನಲ್ಲೂ ಪಟಾಕಿ ಸಿಡಿಸುತ್ತಾರಲ್ಲಾ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಪಟಾಕಿ ವಿಷಯಕ್ಕೆ ಕೊಹ್ಲಿ ಮೇಲೆ ಅಭಿಮಾನಿಗಳು ಗರಂ ಆಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ