Publish Date: Sun, 05 Jul 2020 (15:06 IST)
Updated Date: Sun, 05 Jul 2020 (15:08 IST)
ಖ್ಯಾತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟ್ಸಮನ್ ಕುಸಲ್ ಮೆಂಡಿಸ್ ಬಂಧನಕ್ಕೆ ಒಳಗಾಗಿದ್ದಾರೆ.
ಸೈಕಲ್ ಸವಾರನೊಬ್ಬನಿಗೆ ಕಾರಿನಲ್ಲಿದ್ದ ಕುಸಲ್ ಮೆಂಡಿಸ್ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದ್ದು, ಅಪಘಾತದಲ್ಲಿ ಸೈಕಲ್ ಸವಾರ ಮೃತಪಟ್ಟಿದ್ದಾನೆ.
ಕಾರ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಕ್ರಿಕೆಟರ್ ಕುಸಲ್ ಮೆಂಡಿಸ್ ರನ್ನು ಬಂಧನ ಮಾಡಿದ್ದಾರೆ.