Select Your Language

Notifications

webdunia
webdunia
webdunia
webdunia

ಸಾರಾ ತೆಂಡೂಲ‌್ಕರ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ– ಟೆಕ್ಕಿ ಬಂಧನ

ಸಾರಾ ತೆಂಡೂಲ‌್ಕರ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ– ಟೆಕ್ಕಿ ಬಂಧನ
ಮುಂಬೈ , ಗುರುವಾರ, 8 ಫೆಬ್ರವರಿ 2018 (15:16 IST)
ಭಾರತದ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದಿದ್ದ ಟೆಕ್ಕಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
 
ಅಂಧೇರಿಯಲ್ಲಿ ಟೆಕ್ಕಿ ನಿತೀನ್ ಸಿಸೋದೆ(37) ಅವರನ್ನು ಬಂಧಿಸಲಾಗಿದೆ. ಸಾರಾ ತೆಂಡೂಲ್ಕರ್ ಹೆಸರಿನಲ್ಲಿ ತೆರೆದಿದ್ದ ನಕಲಿ ಖಾತೆ ಮೂಲಕ ಕಾಂಗ್ರೆಸ್ ಮುಖಂಡ ಶರದ್ ಪವಾರ್ ಅವರ ವಿರುದ್ಧ ಅವಹೇಳನಕಾರಿ ಕಮೆಂಟ್‌ಗಳನ್ನು ಟ್ವೀಟ್ ಮಾಡಿದ್ದ.
 
ಸಚಿನ್ ತೆಂಡೂಲ್ಕರ್ ಅವರ ಆಪ್ತಸಹಾಯಕ ದೂರು ದಾಖಲಿಸಿದ್ದ, ಪೊಲೀಸರು ಟೆಕ್ಕಿಯನ್ನು ಬಂಧಿಸಿ ಲ್ಯಾಪ್‌ಟಾಪ್, ಎರಡು ಮೊಬೈಲ್, ರೂಟರ್, ಕಂಪ್ಯೂಟರ್ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಗರಿಮೆಗೆ ಮತ್ತೊಂದು ದಾಖಲೆ!