Publish Date: Thu, 08 Feb 2018 (07:15 IST)
Updated Date: Thu, 08 Feb 2018 (07:21 IST)
ನವದೆಹಲಿ : ಹಿಂದಿ ಚಿತ್ರನಟ ಅನುಪಮ್ ಖೇರ್, ರಾಜ್ಯಸಭೆ ಸದಸ್ಯರಾದ ಸ್ವಪನ್ ದಾಸುಪ್ತಾ,, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಟ್ವಿಟ್ಟರ್ ಕಾತೆಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಈಗ ಮತ್ತೊಬ್ಬ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಖಾತೆಯನ್ನೂ ಕೂಡ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ.
"ಭಾರತದ ಅತ್ಯಂತ ಪ್ರಸಿದ್ಧ ನಟರಾದ ಅಭಿಷೇಕ್ ಬಚ್ಚನ್ ಟ್ವಿಟ್ಟರ್ ಖಾತೆ ನಮ್ಮಿಂದ ಹ್ಯಾಕ್ ಮಾಡಲ್ಪಟ್ಟಿದೆ ನಾವು ಡಿಎಂ ಪತ್ರ ವ್ಯವಹಾರ ಮತ್ತು ಮಾಹಿತಿ ಪಡೆದುಕೊಂಡಿದ್ದೇವೆ. ಟ್ವಿಟ್ಟರ್ ಸಂಸ್ಥೆ ನಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸುವವರೆಗೆ ನಮ್ಮ ಹ್ಯಾಕಿಂಗ್ ದಾಳಿಯು ಮುಂದುವರಿಯುತ್ತದೆ, " ಎಂದು ಹ್ಯಾಕರ್ಸ್ ಗಳು ಟ್ವಿಟ್ಟರ್ ಸಂಸ್ಥೆಗೆ ಅಧಿಕೃತ ಪಂಥಾಹ್ವಾನ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ