Publish Date: Tue, 30 Jan 2018 (13:01 IST)
Updated Date: Tue, 30 Jan 2018 (13:12 IST)
ನವದೆಹಲಿ: 8 ತಿಂಗಳ ಹಸುಳೆಯ ಮೇಲೆ ಸಂಬಂಧಿಕನೊಬ್ಬ ಅತ್ಯಾಚಾರ ಎಸಗಿದ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ, ರಕ್ತಸ್ರಾವದಿಂದ ಬಳಲುತ್ತಿರುವ ಮಗು ಈಗ ಐಸಿಯು ನಲ್ಲಿದೆ. ಮಗುವಿಗೆ ಮೂರು ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ. ತಂದೆ-ತಾಯಿ ಇಬ್ಬರೂ ಮನೆಯಿಂದ ಹೊರಗಡೆ ಹೋಗಿದ್ದಾಗ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
‘ನಾನು ಕೆಲಸಕ್ಕಾಗಿ ಮನೆಯಿಂದ ಹೋಗಿದ್ದೆ. ಸ್ವಲ್ಪ ಸಮಯದ ಬಳಿಕ ಪತ್ನಿಯೂ ಮನೆಯಿಂದ ಹೊರ ಬಂದಿದ್ದಳು. ಎಂದು ಮಗುವಿನ ತಂದೆ ಹೇಳಿದ್ದಾರೆ. ಸಂಬಂಧಿಕರೊಬ್ಬರ ಬಳಿ ಮಗುವನ್ನು ಬಿಟ್ಟು ಹೋಗಲಾಗುತ್ತಿತ್ತು. ತಾಯಿ ಮನೆಗೆ ಬಂದಾಗ ಮಗು ಅಳುತ್ತಿತ್ತು. ಹಾಗೆ ಹಾಸಿಗೆ ತುಂಬ ರಕ್ತವಿತ್ತು. ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಖಚಿತವಾಗಿದೆ.
ಈ ಘಟನೆಯ ನಂತರ ನಾಪತ್ತೆಯಾಗಿರುವ ಸಂಬಂಧಿಕನೊಬ್ಬನ ಬಗ್ಗೆ ಅನುಮಾನ ಇರುವುದಾಗಿ ಮಗುವಿನ ಹೆತ್ತವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ