Select Your Language

Notifications

webdunia
webdunia
webdunia
webdunia

ನಿಮ್ಮ ಮಗುವನ್ನು ಲೈಂಗಿಕ ದೌರ್ಜನ್ಯದಿಂದ ಪಾರುಮಾಡಲು ಏನು ಮಾಡಬೇಕು ಗೊತ್ತಾ...?

ನಿಮ್ಮ ಮಗುವನ್ನು ಲೈಂಗಿಕ ದೌರ್ಜನ್ಯದಿಂದ ಪಾರುಮಾಡಲು ಏನು ಮಾಡಬೇಕು ಗೊತ್ತಾ...?
ಬೆಂಗಳೂರು , ಗುರುವಾರ, 25 ಜನವರಿ 2018 (06:51 IST)
ಬೆಂಗಳೂರು : ಇತ್ತಿಚೆಗೆ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕಾಗಿ ಹೆತ್ತವರು ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳಬೇಕು. ಅದಕ್ಕಾಗಿ ನಿಮ್ಮ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಪಾರುಮಾಡಲು ಕೆಲವು ಮಾರ್ಗಗಳನ್ನು ಅನುಸರಿಸಿ.

 
ನಿಮ್ಮ ಹೆಣ್ಣುಮಕ್ಕಳನ್ನು ತಂದೆ, ತಾಯಿ, ಅಜ್ಜ,ಅಜ್ಜಿಯಂದಿರನ್ನು ಹೊರತು ಪಡಿಸಿ ಯಾರ ತೊಡೆಯ ಮೇಲೂ ಕುಳಿತುಕೊಳ್ಳದಂತೆ ಎಚ್ಚರ ವಹಿಸಿ. ಮಕ್ಕಳು 2-3 ವರ್ಷದವರಾದ ನಂತರ ಅವರ ಮುಂದೆ ಬಟ್ಟೆ ನೀವು ಬದಲಿಸಬೇಡಿ. ಹಾಗೆ ಅವರ ಬಟ್ಟೆಗಳನ್ನು ಬೇರೆಯವರ ಮುಂದೆ ಬದಲಿಸದೆ ಕೋಣೆ ಒಳಗೆ ಬದಲಾಯಿಸುವ ಅಭ್ಯಾಸ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ ನಿನ್ನ ಗಂಡ/ ಹೆಂಡತಿ ಎಂದು ಸಂಭೋದಿಸುವುದಕ್ಕೆ ಅವಕಾಶ ನೀಡಬೇಡಿ.

 
ನಿಮ್ಮ ಮಕ್ಕಳು ಹೊರಗೆ ಆಟವಾಡಲು ಹೋದಾಗ ಅವರು ಏನು ಹಾಗು ಯಾರ ಜೊತೆ ಆಟವಾಡುತ್ತಿದ್ದಾರೆ ಎಂಬುದನ್ನು ಆಗಾಗ ಗಮನಿಸುತ್ತಾ ಇರಿ. ನಿಮ್ಮ ಮಕ್ಕಳಿಗೆ ಇಷ್ಟವಾಗದ ವ್ಯಕ್ತಿಯ ಜೊತೆ ಮಾತನಾಡಲು ಅಥವಾ ಸಮಯ ಕಳೆಯಲು ಒತ್ತಡ ಹೇರಬೇಡಿ ಹಾಗೆಯೇ ನಿಮ್ಮ ಮಗು ಧಿಡೀರನೇ ಯಾರನ್ನಾದರೂ ಹಚ್ಚಿಕೊಂಡರೆ ಅದರ ಬಗ್ಗೆ ಗಮನ ಹರಿಸಿ. ತುಂಬಾ ಲವಲವಿಕೆಯಿಂದ ಇರುವ ಮಗು ಒಮ್ಮೆಗೆ ಮೌನವಾದರೆ ಅವರನ್ನು ಹಾಗೆ ಬಿಡದೆ ಅವರ ಬಳಿ ಕುಳಿತುಕೊಂಡು ಅವರ ಮನಸಲ್ಲಿ ಏನಿದೆ ಎಂಬುದನ್ನು ಸಮಾಧಾನದಿಂದ ಕೇಳಿತಿಳಿದುಕೊಂಡು ಪರಿಹರಿಸಿ.



ಬೆಳೆಯುತ್ತಿರುವ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಿ ಅಥವಾ ಅವರು ಲೈಂಗಿಕತೆಯ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಅರ್ಥವಾಗುವ ರೀತಿ ಬಿಡಿಸಿ ಹೇಳಿ. ಅವರಿಗೆ ಹೊಸದಾಗಿ ಕೊಡಿಸುವ ಆಟದ ಸಾಮಾನುಗಳನ್ನು ಮೊದಲು ನೀವು ಗಮನಿಸಿ ಅದರಲ್ಲಿ ಅಶ್ಲೀಲವಿದೆಯೇ ಎಂಬುದನ್ನು ನೋಡಿ ನಂತರ ಅವರಿಗೆ ಕೊಡಿಸಿ. ನಿಮ್ಮ ಮಕ್ಕಳ ಸ್ನೇಹಿತರ ಪೋಷಕರ ಜೊತೆ ಸಂಪರ್ಕದಲ್ಲಿರಿ. ಆಗ ಮಕ್ಕಳು ದಾರಿ ತಪ್ಪಿ ಹೋಗುತ್ತಿದ್ದರೆ ಎಲ್ಲರೂ ಒಟ್ಟಿಗೆ ಸೇರಿ ತಿಳಿಹೇಳಬಹುದು. ನಿಮ್ಮ ಮಕ್ಕಳಿಗೆ ನಿಮ್ಮನ್ನು ಹೊರತು ಇತರರು ದೇಹವನ್ನು ಮುಟ್ಟಲು ಬಿಡಬೇಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೈಪಡ್ ಜ್ವರ ಬೇಗ ವಾಸಿಯಾಗಲು ಈ ವಿಧಾನ ಅನುಸರಿಸಿ