Publish Date: Fri, 22 Dec 2017 (14:46 IST)
Updated Date: Fri, 22 Dec 2017 (14:48 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೀಚ ಮನುಷ್ಯ ಎಂದು ವಿವಾದಕ್ಕೆ ಸಿಲುಕಿದ್ದ ಮಣಿಶಂಕರ್ ಅಯ್ಯರ್ ಗುಜರಾತ್ ಚುನಾವಣಾ ಫಲಿತಾಂಶ ಬಗ್ಗೆ ಪ್ರತಿಕ್ರಿಯಿದೆ ಮೌನಕ್ಕೆ ಶರಣಾಗಿದ್ದಾರೆ.
ಕೋಲ್ಕತ್ತಾದಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಯ್ಯರ್ ಚುನಾವಣಾ ಫಲಿತಾಂಶ ಕುರಿತಂತೆ ತುಟಿ ಬಿಟ್ಟಿಲ್ಲ. ಮಾಧ್ಯಮಗಳು ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಾರೆ. ಆದರೆ, ಅಯ್ಯರ್ ಮಾತ್ರ ಯಾವುದೇ ಮಾತನಾಡದೇ ಮೌನಕ್ಕೆ ಶರಣಾಗುವ ಮೂಲಕ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ನರೇಂದ್ರ ಮೋದಿ ಬಗ್ಗೆ ಮಣಿಶಂಕರ್ ಅಯ್ಯರ್ ನೀಡಿದ್ದ ಹೇಳಿಕೆ, ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಇರುಸುಮುರುಸು ಉಂಟು ಮಾಡಿತ್ತು. ಅಯ್ಯರ್‌ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಕಾಂಗ್ರೆಸ್ ಅಮಾನತು ಮಾಡಿದೆ.
ಗುಜರಾತ್ ಚುನಾವಣೆ ಮುಗಿದಿದ್ದು, ಫಲಿತಾಂಶ ಕೂಡ ಪ್ರಕಟಗೊಂಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು, ಚುನಾವಣಾ ಫಲಿತಾಂಶ ಬಗ್ಗೆ ಮಾಧ್ಯಮಗಳು ಅಯ್ಯರ್ ಅವರನ್ನು ಪ್ರಶ್ನಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.