ಗುಜರಾತ್ ಗೆ ಹೊಸ ಸಿಎಂ ಆಯ್ಕೆಗೆ ಬಿಜೆಪಿ ಸೂತ್ರ

ಶುಕ್ರವಾರ, 22 ಡಿಸೆಂಬರ್ 2017 (12:49 IST)
ನವದೆಹಲಿ: ಇತ್ತೀಚೆಗಷ್ಟೇ ಗುಜರಾತ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಬಿಜೆಪಿ ನಾಯಕರಿಗೆ ಇದೀಗ ನೂತನ ಸಿಎಂ ಆಯ್ಕೆ ಮಾಡುವ ತಲೆನೋವು ಎದುರಾಗಿದೆ.
 

ಮೂಲಗಳ ಪ್ರಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಸಿಎಂ ಹಾಗೂ ಇಬ್ಬರು ಡಿಸಿಎಂಗಳನ್ನು ನೇಮಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಪಟೇಲ್ ಮತ್ತು ಆದಿವಾಸಿ ಸಮುದಾಯದ ಒಬ್ಬೊಬ್ಬ ನಾಯಕರಿಗೆ ಡಿಸಿಎಂ ಪಟ್ಟ ನೀಡಿ ಆ ಸಮುದಾಯದವರನ್ನು ತೃಪ್ತಿ ಪಡಿಸುವ ಉದ್ದೇಶ ರಾಷ್ಟ್ರ ನಾಯಕರದ್ದು ಎನ್ನಲಾಗಿದೆ.

ಇಂದು ಸಂಜೆ ದೆಹಲಿಯಲ್ಲಿ ಬಿಜೆಪಿ ನಾಯಕರು ಸಭೆ ಸೇರುತ್ತಿದ್ದು, ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಗೆ ಹೊಸ ಸಿಎಂ ಯಾರೆಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಗುಜರಾತ್ ಗೆ ಹಾಲಿ ಸಿಎಂ ವಿಜಯ್ ರೂಪಾಣಿ ಅವರೇ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬೇಡಿ ಎನ್ನುವ ನಿಮ್ಮ ಉದ್ದೇಶವೇನು? : ಸಿಎಂ ಯೋಗಿಗೆ ಪ್ರಕಾಶ್ ರೈ ತರಾಟೆ