Publish Date: Fri, 22 Dec 2017 (11:24 IST)
Updated Date: Fri, 22 Dec 2017 (11:25 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮದುವೆಯಾದ ಮೇಲೆ ಪತಿ ಜಗದೀಶ್ ಜತೆ ಆರಾಮವಾಗಿದ್ದಾರೆ. ಸಿನಿಮಾ ಕಡೆ ತಲೆ ಹಾಕದ ಅಮೂಲ್ಯ ಇದೀಗ ರಾಜಕೀಯ ಕಡೆ ಹೆಜ್ಜೆ ಹಾಕಲಿದ್ದಾರಾ?
ಹಾಗೊಂದು ಸುದ್ದಿ ಹಬ್ಬಿದೆ. ನಟಿ ಅಮೂಲ್ಯ ತಾವೇ ಚುನಾವಣಾ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹಿಂದೊಮ್ಮೆ ಹಬ್ಬಿತ್ತು. ಆದರೆ ಇದೀಗ ಮಾವ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ರಾಮಚಂದ್ರಪ್ಪ ಅವರ ಪರ ಪ್ರಚಾರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಿಜೆಪಿ ಮಾಜಿ ಕಾರ್ಪೋರೇಟರ್ ಆಗಿರುವ ರಾಮಚಂದ್ರಪ್ಪ ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಜೆಡಿಎಸ್ ನಿಂದಾದರೂ ಕಣಕ್ಕಿಳಿಯಲಿದ್ದಾರೆ. ಆಗ ಅಮೂಲ್ಯ ಮಾವನ ಪರ ಪ್ರಚಾರ ನಡೆಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಈ ಬಗ್ಗೆ ಅಮೂಲ್ಯ ಆಗಲೀ, ಕುಟುಂಬದವರಾಗಲೀ ಸ್ಪಷ್ಟನೆ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ