Publish Date: Fri, 25 Oct 2019 (09:20 IST)
Updated Date: Fri, 25 Oct 2019 (09:23 IST)
ರಾಂಚಿ: ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಈಗ ಏನು ಮಾಡುತ್ತಿದ್ದಾರೆ? ಅದಕ್ಕೆ ಉತ್ತರ ಸಿಕ್ಕಿದೆ ನೋಡಿ!
ಧೋನಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪುತ್ರಿ ಜೀವಾ ಜತೆಗೆ ತಮ್ಮ ನೆಚ್ಚಿನ ಜೀಪ್ ನ್ನು ತೊಳೆಯುವ ದೃಶ್ಯದ ವಿಡಿಯೋ ಪ್ರಕಟಿಸಿದ್ದು, ದೊಡ್ಡ ವಸ್ತುವನ್ನು ಶುಚಿಗೊಳಿಸುವ ಪುಟ್ಟ ಕೈಗಳ ಸಹಾಯವಿದ್ದರೆ ಚೆನ್ನಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಧೋನಿ ಸರಳತೆಯನ್ನು ಹೆಚ್ಚಿನವರು ಕೊಂಡಾಡಿದ್ದಾರೆ. ಮತ್ತೆ ಕೆಲವರು ತಂದೆ ತಕ್ಕ ಮಗಳು ಎಂದು ಮೆಚ್ಚಿದ್ದಾರೆ. ಇನ್ನು ಕೆಲವರು ಇದೆಲ್ಲಾ ಬಿಡಿ, ಮೈದಾನಕ್ಕೆ ವಾಪಸಾಗುವುದು ಯಾವಾಗ ಹೇಳಿ ಎಂದು ಪ್ರಶ್ನಿಸಿದ್ದಾರೆ. ಅಂತೂ ಧೋನಿ ಅಭಿಮಾನಿಗಳಿಗೆ ಈ ವಿಡಿಯೋ ಭಾರೀ ಇಷ್ಟವಾದಂತಿದೆ.