Publish Date: Thu, 24 Oct 2019 (10:53 IST)
Updated Date: Thu, 24 Oct 2019 (10:54 IST)
ಮುಂಬೈ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ಕ್ರಿಕೆಟಿಗರು ಪ್ರತಿಭಟನೆ ನಡೆಸುತ್ತಿದ್ದರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ ನಲ್ಲಿ ನಡೆಯಬೇಕಿದ್ದ ಸರಣಿ ನಡೆಯುವುದು ಅನುಮಾನ ಎನ್ನುವ ಸ್ಥಿತಿ ಇತ್ತು. ಆದರೆ ಈಗ ಅದೆಲ್ಲವೂ ದೂರವಾಗಿದೆ.
ಬಾಂಗ್ಲಾದೇಶ ಕ್ರಿಕೆಟಿಗರಿಗೆ ವೇತನ ಹೆಚ್ಚಳ ಮಾಡುವುದಾಗಿ ಬಿಸಿಬಿ ಭರವಸೆ ನೀಡಿದ ಹಿನ್ನಲೆಯಲ್ಲಿ ಕ್ರಿಕೆಟಿಗರು ಪ್ರತಿಭಟನೆಗೆ ಅಂತ್ಯ ಹಾಡಿದ್ದಾರೆ. ಹೀಗಾಗಿ ಭಾರತಕ್ಕೆ ಪ್ರವಾಸ ಮಾಡುವುದು ಖಚಿತವಾಗಿದೆ.
ಆಟಗಾರರ ಹೆಚ್ಚಿನ ಬೇಡಿಕೆಗಳನ್ನು ಪುರಸ್ಕರಿಸಲಾಗಿದೆ. ಹೀಗಾಗಿ ಕ್ರಿಕೆಟಿಗರು ಪ್ರತಿಭಟನೆ ಕೈ ಬಿಟ್ಟಿದ್ದಾರೆ ಎಂದು ಬಿಸಿಬಿ ಹೇಳಿದೆ. ನವಂಬರ್ ನಲ್ಲಿ ಭಾರತ ಪ್ರವಾಸ ಮಾಡಲಿರುವ ಬಾಂಗ್ಲಾ ತಂಡ ಟಿ20 ಸರಣಿ ಆಡಲಿದೆ.