Publish Date: Thu, 24 Oct 2019 (09:14 IST)
Updated Date: Thu, 24 Oct 2019 (09:16 IST)
ಮುಂಬೈ: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಭಾರತ-ಬಾಂಗ್ಲಾ ಟಿ20 ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ ಮಾಡುವ ಸಾಧ‍್ಯತೆಯಿದೆ.
ಮುಂಬೈಯ ಬಿಸಿಸಿಐ ಕಚೇರಿಯಲ್ಲಿ ಸಭೆ ಸೇರಲಿರುವ ಆಯ್ಕೆ ಸಮಿತಿ ಟೀಂ ಇಂಡಿಯಾ ಆಯ್ಕೆ ಜತೆಗೆ ಧೋನಿ ಭವಿಷ್ಯದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಧೋನಿ ಈ ಸರಣಿಗೆ ಲಭ‍್ಯರಿಲ್ಲ ಎಂದಿದ್ದಾರೆ. ಹೀಗಾಗಿ ಅವರ ಬದಲು ಫಾರ್ಮ್ ಕಳೆದುಕೊಂಡಿರುವ ರಿಷಬ್ ಗೇ ಮತ್ತೆ ಅವಕಾಶ ನೀಡುತ್ತಾರೆಯೇ ಅಥವಾ ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಗೆ ಮಣೆ ಹಾಕುತ್ತಾರಾ ಕಾದು ನೋಡಬೇಕಿದೆ.
ಇನ್ನು, ಮೂಲಗಳ ಪ್ರಕಾರ ಸತತ ಕ್ರಿಕೆಟ್ ನಿಂದ ಬಳಲಿರುವ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇಲ್ಲದಿಲ್ಲ. ಇವೆಲ್ಲಾ ಪ್ರಶ್ನೆಗಳಿಗೂ ಇಂದು ನಡೆಯಲಿರುವ ಆಯ್ಕೆ ಸಮಿತಿ ಸಭೆಯಲ್ಲಿ ಉತ್ತರ ಸಿಗಲಿದೆ.