ಮುಂಬೈ: ಭಾರತ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಟಿ20 ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಬರುತ್ತೋ ಇಲ್ಲವೋ ಎಂಬ ಅನುಮಾನಗಳಿಗೆ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.
ವಿವಿಧ ಬೇಡಿಕೆಯನ್ನಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟಿಗರು ಬಾಂಗ್ಲಾ ಕ್ರಿಕೆಟ್ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಭಾರತ-ಬಾಂಗ್ಲಾದೇಶ ನಡುವಿನ ಸರಣಿಗೆ ಬಾಂಗ್ಲಾ ಕ್ರಿಕೆಟಿಗರು ಬರುವುದು ಅನುಮಾನವಾಗಿದೆ.
ಈ ಬಗ್ಗೆ ಸೌರವ್ ಗಂಗೂಲಿಯವರನ್ನು ಪ್ರಶ್ನಿಸಿದಾಗ ‘ಇದು ಅವರ ಆಂತರಿಕ ಸಮಸ್ಯೆ. ಹಾಗಿದ್ದರೂ ಅವರು ಭಾರತಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆಯಿದೆ’ ಎಂದಿದ್ದಾರೆ.