ಮುಂಬೈ: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ತಿರುಗಿ ಬಿದ್ದಿರುವ ಬಾಂಗ್ಲಾ ಕ್ರಿಕೆಟಿಗರು ಭಾರತ ಸರಣಿಯಿಂದ ಹಿಂದೆ ಸರಿಯುವ ಸಾಧ‍್ಯತೆಯಿದೆ.
ಮುಂದಿನ ತಿಂಗಳು ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಟಿ20 ಸರಣಿ ಆಡಬೇಕಿದೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಕ್ರಿಕೆಟಿಗರು ಎಲ್ಲಾ ಬಿಟ್ಟು ಪ್ರತಿಭಟನೆಗೆ ಕೂತಿದ್ದಾರೆ. ಹಾಗಾಗಿ ಭಾರತ ಪ್ರವಾಸಕ್ಕೆ ಕ್ರಿಕೆಟಿಗರು ಬಾರದೇ ಪಟ್ಟು ಹಿಡಿಯುವ ಸಾಧ‍್ಯೆಯಿದೆ.
ಇದರಿಂದಾಗಿ ಭಾರತ-ಬಾಂಗ್ಲಾ ಸರಣಿ ಅನುಮಾನದಲ್ಲಿದೆ. ಎ ತಂಡವನ್ನಾದರೂ ಕಳುಹಿಸೋಣವೆಂದರೆ ಸುಮಾರು 50 ಕ್ರಿಕೆಟಿಗರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಬಿಸಿಬಿ ಸಂಕಟಕ್ಕೆ ಸಿಲುಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ನಾವು ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸುತ್ತಿದ್ದೇವೆ. ಬಿಸಿಬಿಯಿಂದ ಅಧಿಕೃತ ಹೇಳಿಕೆ ಬರುವವರೆಗೆ ನಾವು ಏನನ್ನೂ ಹೇಳುವಂತಿಲ್ಲ ಎಂದಿದೆ. ನವಂಬರ್ 3 ರಿಂದ ಸರಣಿ ಆರಂಭವಾಗಬೇಕಿತ್ತು.