Publish Date: Tue, 22 Oct 2019 (10:23 IST)
Updated Date: Tue, 22 Oct 2019 (10:24 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 202 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ.
ಇದರೊಂದಿಗೆ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ದ.ಆಫ್ರಿಕಾವನ್ನು ವೈಟ್ ವಾಶ್ ಮಾಡಿದ ಸಾಧನೆ ಮಾಡಿದೆ. ಇನ್ನು, ದ.ಆಫ್ರಿಕಾ ಪಾಲಿಗೆ ಬರೋಬ್ಬರಿ 19 ವರ್ಷಗಳ ಬಳಿಕ ಸಿಗುತ್ತಿರುವ ಅತ್ಯಂತ ದೊಡ್ಡ ಅಂತರದ ಸೋಲು ಇದಾಗಿದೆ. ಅಲ್ಲದೆ, ಟೆಸ್ಟ್ ಸರಣಿಯಲ್ಲಿ ಇದು ಮೂರನೇ ಬಾರಿ ಸರಣಿ ವೈಟ್ ವಾಶ್ ಅವಮಾನಕ್ಕೆ ಗುರಿಯಾಗಿದೆ.
ಭಾರತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಗೆಲುವಿನ ಶೇಕಡಾ 70 ರಷ್ಟು ದಾಖಲೆ ಮಾಡಿದೆ. ಈ ಸರಣಿಯುದ್ದಕ್ಕೂ ಗಮನ ಸೆಳೆದಿದ್ದು ರೋಹಿತ್ ಶರ್ಮಾ. ಮೂರೂ ಪಂದ್ಯಗಳಲ್ಲಿ ಶತಕ ಜಮಾಯಿಸಿದ ಮುಂಬೈಕರ್ ಗೆ ಅರ್ಹವಾಗಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿದೆ.