Publish Date: Mon, 22 Apr 2019 (07:36 IST)
Updated Date: Mon, 22 Apr 2019 (07:37 IST)
ಬೆಂಗಳೂರು: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ರೋಚಕ ಗೆಲುವು ದಾಖಲಿಸಿದೆ. ಆದರೆ ಸಿಎಸ್ ಕೆ ತಂಡವನ್ನು ಗೆಲುವಿನ ಅಂಚಿನವರೆಗೆ ಕೊಂಡೊಯ್ದ ಧೋನಿ ಬ್ಯಾಟಿಂಗ್ ನಮಗೆ ಭಯ ಹುಟ್ಟಿಸಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಧೋನಿ ಈ ಪಂದ್ಯದಲ್ಲಿ 48 ಎಸೆತಗಳಲ್ಲಿ 84 ರನ್ ಸಿಡಿಸಿದ್ದರು. ಗೆಲುವಿಗೆ ಒಂದು ರನ್ ಇದ್ದಾಗ ಅವರು ಔಟಾದರು. ಒಂದು ವೇಳೆ ಕೊನೆಯ ಎಸೆತದಲ್ಲಿ ಔಟಾಗದಿದ್ದರೆ ಆರ್ ಸಿಬಿ ಸೋಲು ಕಾಣುತ್ತಿತ್ತು.
ಹೀಗಾಗಿ ಪಂದ್ಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಧೋನಿ ನಮಗೆ ಭಯ ಹುಟ್ಟಿಸಿದರು. ಅವರು ನಮ್ಮಿಂದ ಜಯ ಕಸಿದುಕೊಂಡೇ ಬಿಟ್ಟರು ಎಂದೇ ಅಂದುಕೊಂಡಿದ್ದೆವು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ