Publish Date: Tue, 10 Dec 2019 (10:01 IST)
Updated Date: Tue, 10 Dec 2019 (10:03 IST)
ಕೋಲ್ಕೊತ್ತಾ: ಕೋಲ್ಕೊತ್ತಾ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಲಗ್ಗೇಜ್ ಅದಲು ಬದಲಾದ ಘಟನೆ ನಿನ್ನೆ ನಡೆದಿದೆ.
ಕೋಲ್ಕೊತ್ತಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಧೋನಿ ಲಗ್ಗೇಜ್ ಇನ್ನೊಬ್ಬ ಪ್ರಯಾಣಿಕರ ಕೈ ಸೇರಿತ್ತು. ಧೋನಿ ಇನ್ನೊಬ್ಬ ಪ್ರಯಾಣಿಕರ ಲಗ್ಗೇಜ್ ಹೊತ್ತುಕೊಳ್ಳುವಂತಾಯಿತು.
ಆದರೆ ಇದು ಧೋನಿಗೆ ಗೊತ್ತಾಗಿದ್ದು ಅವರು ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ. ಬಳಿಕ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಧೋನಿ ವಿಷಯ ತಿಳಿಸಿದ್ದು, ಇದೀಗ ಅಧಿಕಾರಿಗಳು ಅದಲು ಬದಲಾದ ಲಗ್ಗೇಜ್ ಗಳನ್ನು ಮರಳಿ ಆಯಾ ವ್ಯಕ್ತಿಗಳಿಗೆ ಒದಗಿಸಲು ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.