Select Your Language

Notifications

webdunia
webdunia
webdunia
webdunia

ನಾಯಕ ಕೊಹ್ಲಿಗೆ ಆದೇಶ ನೀಡುತ್ತಿದ್ದ ಧೋನಿ ಧ್ವನಿ ಬಹಿರಂಗವಾಯ್ತು

ನಾಯಕ ಕೊಹ್ಲಿಗೆ ಆದೇಶ ನೀಡುತ್ತಿದ್ದ ಧೋನಿ ಧ್ವನಿ ಬಹಿರಂಗವಾಯ್ತು
ಪುಣೆ , ಶುಕ್ರವಾರ, 27 ಅಕ್ಟೋಬರ್ 2017 (08:28 IST)
ಪುಣೆ: ಟೀಂ ಇಂಡಿಯಾಗೆ ಅಧಿಕೃತವಾಗಿ ವಿರಾಟ್ ಕೊಹ್ಲಿ ನಾಯಕನಾಗಿದ್ದರೂ ಧೋನಿಯೇ ಬಾಸ್ ಎನ್ನುವುದು ದ್ವಿತೀಯ ಏಕದಿನ ಪಂದ್ಯದಲ್ಲಿ ಮತ್ತೆ ಸಾಬೀತಾಗಿದೆ. ಕೊಹ್ಲಿಗೆ ಫೀಲ್ಡಿಂಗ್ ವಿಚಾರದಲ್ಲಿ ಧೋನಿ ಸಲಹೆ ನೀಡುತ್ತಿರುವುದು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ.

 
ಫೀಲ್ಡಿಂಗ್ ಸೆಟ್ ಮಾಡಲು ಕೊಹ್ಲಿಗೆ ಧೋನಿ ನಿರ್ದೇಶನ ನೀಡುವುದು ಸ್ಪಷ್ಟವಾಗಿ ದಾಖಲಾಗಿದೆ. ಕೇದಾರ್ ಜಾದವ್ ಬೌಲಿಂಗ್ ಮಾಡುತ್ತಿದ್ದಾಗ ಕೊಹ್ಲಿಯನ್ನು ಕರೆದ ಧೋನಿ ‘ಚೀಕೂ.. ಇಲ್ಲಿ 2-3 ಫೀಲ್ಡರ್ ಗಳನ್ನು ನಿಲ್ಲಿಸು’ ಎಂದಿದ್ದರು.

ಇನ್ನೊಂದು ಬಾರಿ ಕೊಹ್ಲಿ ಫೀಲ್ಡಿಂಗ್ ಮತ್ತೊಮ್ಮೆ ಸೆಟ್ ಮಾಡಲು ಹೊರಟಾಗ ‘ಸ್ವಲ್ಪ ತಡಿ. ಇನ್ನೊಂದು ಬಾಲ್ ಹಾಕುವವರೆಗೆ ಕಾಯೋಣ. ಇದಕ್ಕಿಂತ ಮೊದಲು ನಾನು ಹೇಳಿದ ಹಾಗೇ ಇರಲಿ’ ಎಂದು ಧೋನಿ ಕೊಹ್ಲಿಗೆ ನಿರ್ದೇಶನ ನೀಡುತ್ತಿರುವುದು ಸ್ಪಷ್ಟವಾಗಿ ಕೇಳಿಸಿದೆ.  ಈ ಬಗ್ಗೆ ಪಂದ್ಯ ನಂತರ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ಕೇಳಿದಾಗ ‘ಧೋನಿ ಭಾಯಿ ಈಗಲೂ ನಮ್ಮ ನಾಯಕ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ ಬಾಲ್ ದಿಗ್ಗಜನನ್ನೂ ಮೀರಿಸಿದ ವಿರಾಟ್ ಕೊಹ್ಲಿ