Publish Date: Fri, 18 Mar 2022 (11:11 IST)
Updated Date: Fri, 18 Mar 2022 (11:13 IST)
ಮುಂಬೈ: ಹೋಳಿ ಹುಣ್ಣಮೆ ಪ್ರಯುಕ್ತ ದೇಶದ ಜನತೆ ಇಂದು ಬಣ್ಣದ ಹಬ್ಬದಲ್ಲಿ ಮುಳುಗೇಳುತ್ತಿದ್ದಾರೆ. ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗರು ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್ ಸೇರಿದಂತೆ ಬಹುತೇಕ ಹಾಲಿ ಕ್ರಿಕೆಟಿಗರು ಹಾಗೂ ಸಚಿನ್ ತೆಂಡುಲ್ಕರ್ ಮೊದಲಾದ ಕ್ರಿಕೆಟ್ ದಿಗ್ಗಜರು ಸಾಮಾಜಿಕ ಜಾಲತಾಣದ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ.
ಇನ್ನು, ರಿಷಬ್ ಪಂತ್ ಡೆಲ್ಲಿ ತಂಡದ ಜೊತೆಗೆ ಹೋಳಿ ಹಬ್ಬ ಆಚರಿಸಿದ ಕ್ಷಣಗಳನ್ನು ಪ್ರಕಟಿಸಿದ್ದಾರೆ.