Publish Date: Tue, 15 Mar 2022 (11:43 IST)
Updated Date: Tue, 15 Mar 2022 (09:20 IST)
ಮುಂಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಇನ್ನು ಎರಡೂವರೆ ತಿಂಗಳು ಕ್ರಿಕೆಟ್ ಆಡಲ್ಲ!
ಯಾಕೆಂದರೆ ಈ ಸರಣಿ ಮುಕ್ತಾಯದ ಬಳಿಕ ಭಾರತದಲ್ಲಿ ಐಪಿಎಲ್ ಜಾತ್ರೆ ಶುರುವಾಗಲಿದೆ. ಈ ತಿಂಗಳ ಅಂತ್ಯದಿಂದ ಐಪಿಎಲ್ ಆರಂಭವಾಗಲಿದ್ದು, ಮೇವರೆಗೂ ಟೂರ್ನಿ ನಡೆಯಲಿದೆ.
ಇದಾದ ಬಳಿಕ ಜೂನ್ ನಲ್ಲಿ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಟಿ20 ಸರಣಿಯೊಂದಿಗೆ ಹೊಸ ಋತು ಆರಂಭಿಸಲಿದೆ. ಅದಕ್ಕೂ ಮೊದಲು ಐಪಿಎಲ್ ನಲ್ಲಿ ಟೀಂ ಇಂಡಿಯಾ ಆಟಗಾರರು ಬೇರೆ ಬೇರೆ ತಂಡದ ಪರ ಆಡುವುದನ್ನು ನೋಡಬಹುದು.