Publish Date: Mon, 01 Feb 2021 (10:28 IST)
Updated Date: Mon, 01 Feb 2021 (10:29 IST)
ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಒಂದಡಿ ಹೆಜ್ಜೆಯಿಡಲೂ ಹೆದರ್ತಾರೆ! ಹೀಗಂತ ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಶೇನ್ ಲೀ ಹೇಳಿಕೊಂಡಿದ್ದಾರೆ.
ಅವರ ಬದಲು ರೆಹಾನೆ ಉತ್ತಮ ನಾಯಕ. ಅವರು ಇರುವ ರೀತಿಗೆ ನನ್ನ ಪ್ರಕಾರ ಅವರು ಬೆಸ್ಟ್ ನಾಯಕ. ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್. ಆದರೆ ಅವರು ಆಟಗಾರರ ಮೇಲೆ ನಿಯಂತ್ರಣ ಹೇರುತ್ತಾರೆ. ಅವರಿಂದ ಅತಿಯಾಗಿ ವೃತ್ತಿಪರತೆ ನಿರೀಕ್ಷಿಸುತ್ತಾರೆ. ಆಟಗಾರರು ಫಿಟ್ ಆಗಿರಬೇಕು ನಿಜ. ಆದರೆ ಭಯದ ವಾತಾವರಣವಿರಬಾರದು ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ.