Publish Date: Wed, 27 Sep 2017 (07:03 IST)
Updated Date: Wed, 27 Sep 2017 (07:06 IST)
ಲಂಡನ್: ಇಂಗ್ಲೆಂಡ್ ನ ಖ್ಯಾತ ಕ್ರಿಕೆಟಿಗ ಬೆನ್ ಸ್ಟೋಕ್ ಬಾರ್ ನಲ್ಲಿ ನಡೆದ ಗಲಾಟೆಯೊಂದರ ಕಾರಣಕ್ಕೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಏಕದಿನ ಪಂದ್ಯ ಮುಗಿದ ಬಳಿಕ ತಂಡದ ಸಹವರ್ತಿ ಅಲೆಕ್ಸ್ ಹೇಲ್ಸ್ ಜತೆ ಲಂಡನ್ ನ ಬಾರ್ ಒಂದಕ್ಕೆ ಸ್ಟೋಕ್ಸ್ ಹೋಗಿದ್ದ ವೇಳೆ ಅಹಿತಕರ ಘಟನೆ ನಡೆದಿದೆ ಎನ್ನಲಾಗಿದೆ.
ಗಲಾಟೆಯಲ್ಲಿ ಸ್ಟೋಕ್ಸ್ ಕೈಗೆ ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಐಪಿಎಲ್ ನಲ್ಲಿ ಅತೀ ದುಬಾರಿ ಬೆಲೆಗೆ ಹರಾಜಾದ ಆಟಗಾರ ಸ್ಟೋಕ್ಸ್ ಮತ್ತು ಹೇಲ್ಸ್ ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಎರಡು ಪಂದ್ಯಗಳಿಗೆ ನಿಷೇಧ ಹೇರಿದೆ.
ನಿಖರವಾಗಿ ಬಾರ್ ನಲ್ಲಿ ನಡೆದಿದ್ದೇನೆಂದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಈ ಬಗ್ಗೆ ನಮ್ಮದೇ ತಂಡದಿಂದ ತನಿಖೆ ನಡೆಸಲಿದ್ದೇವೆ ಎಂದು ಇಸಿಬಿ ನಿರ್ದೇಶಕ ಆಂಡ್ರ್ಯೂ ಸ್ಟ್ರಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ