Publish Date: Sun, 07 Feb 2021 (10:36 IST)
Updated Date: Sun, 07 Feb 2021 (10:37 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದು ಇದೇ ದಿನ.
1999 ರಲ್ಲಿ ಕುಂಬ್ಳೆ ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನೂ ತಮ್ಮದಾಗಿಸಿಕೊಂಡು ದಾಖಲೆ ಮಾಡಿದ್ದರು. ಈ ದಿನವನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದ ಮೂಲಕ ಸ್ಮರಿಸಿಕೊಂಡಿದ್ದು, ಸ್ಪಿನ್ ದಿಗ್ಗಜನಿಗೆ ನಮನ ಸಲ್ಲಿಸಿದೆ.