Select Your Language

Notifications

webdunia
webdunia
webdunia
webdunia

ವೇಗಿ ಶ್ರೀಶಾಂತ್ ಗೆ ಜೀವದಾನ ನೀಡಿದ ಬಿಸಿಸಿಐ ತನಿಖಾಧಿಕಾರಿ

ವೇಗಿ ಶ್ರೀಶಾಂತ್ ಗೆ ಜೀವದಾನ ನೀಡಿದ ಬಿಸಿಸಿಐ ತನಿಖಾಧಿಕಾರಿ
ಮುಂಬೈ , ಬುಧವಾರ, 21 ಆಗಸ್ಟ್ 2019 (09:49 IST)
ಮುಂಬೈ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ಕೇರಳ ಮೂಲದ ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್ ಗೆ ಸ್ವತಂತ್ರ ತನಿಖಾಧಿಕಾರಿ ಡಿಕೆ ಜೈನ್ ಜೀವದಾನ ನೀಡಿದ್ದಾರೆ.


ಕೇರಳ ವೇಗಿ ವಿರುದ್ಧ ಬಿಸಿಸಿಐ ಈ ಮೊದಲು ಹೇರಿದ್ದ ಜೀವಪರ್ಯಂತ ನಿಷೇಧ ನಿರ್ಧಾರವನ್ನು ಹಿಂಪಡೆಯುವಂತೆ ಸುಪ್ರೀಂಕೋರ್ಟ್ ಈ ಮೊದಲು ಆದೇಶಿಸಿತ್ತು. ಅದರಂತೆ ಈಗ ಸುಪ್ರೀಂಕೋರ್ಟ್ ನಿಯಮಿತ ತನಿಖಾಧಿಕಾರಿ ಡಿಕೆ ಜೈನ್ ಶ್ರೀಶಾಂತ್ ಮೇಲಿನ ನಿಷೇಧವನ್ನು ಏಳು ವರ್ಷಕ್ಕೆ ಕಡಿತಗೊಳಿಸಿ ಆದೇಶ ನೀಡಿದ್ದಾರೆ.

ಅಂದರೆ ಶ್ರೀಶಾಂತ್ 2020 ರಿಂದ ಕ್ರಿಕೆಟ್ ಕಣಕ್ಕೆ ಮರಳಬಹುದಾಗಿದೆ. ಈ ಮೊದಲು ಶ್ರೀಶಾಂತ್ ವಿದೇಶೀ ಲೀಗ್ ನಲ್ಲಾದರೂ ಭಾಗವಹಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಸದ್ಯಕ್ಕೆ ಶ್ರೀಶಾಂತ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಕಿ ಪಾಂಟಿಂಗ್ ದಾಖಲೆ ಮುರಿಯಲು ಸಜ್ಜಾಗಿರುವ ವಿರಾಟ್ ಕೊಹ್ಲಿ