Select Your Language

Notifications

webdunia
webdunia
webdunia
webdunia

ಹರ್ಭಜನ್ ಗೆ ಆಗ ಅನ್ಯಾಯವಾಗಿತ್ತು: ಹಳೆಯ ಘಟನೆಯನ್ನು ನೆನೆಸಿಕೊಂಡ ಅನಿಲ್ ಕುಂಬ್ಳೆ

ಹರ್ಭಜನ್ ಗೆ ಆಗ ಅನ್ಯಾಯವಾಗಿತ್ತು: ಹಳೆಯ ಘಟನೆಯನ್ನು ನೆನೆಸಿಕೊಂಡ ಅನಿಲ್ ಕುಂಬ್ಳೆ
ಬೆಂಗಳೂರು , ಭಾನುವಾರ, 2 ಆಗಸ್ಟ್ 2020 (11:29 IST)
ಬೆಂಗಳೂರು: 2008 ರ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಸರಣಿಯನ್ನು ಜನ ಮರೆಯುವಂತೇ ಇಲ್ಲ. ಯಾಕೆಂದರೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಮೇಲೆ ಆವತ್ತು ಜನಾಂಗೀಯ ನಿಂದನೆ ಆರೋಪ ಕೇಳಿಬಂದಿತ್ತು.


ಆಗ ಟೀಂ ಇಂಡಿಯಾ ನಾಯಕರಾಗಿದ್ದ ಅನಿಲ್ ಕುಂಬ್ಳೆ ಆ ಪರಿಸ್ಥಿತಿಯನ್ನು ನಿಭಾಯಿಸಿದ ಬಗ್ಗೆ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಜತೆಗಿನ ಚ್ಯಾಟ್ ಶೋ ಒಂದರಲ್ಲಿ ಕುಂಬ್ಳೆ 2008 ರ ಪ್ರಕರಣವನ್ನು ನೆನೆಸಿಕೊಂಡಿದ್ದಾರೆ. ಆವತ್ತು ನಮ್ಮ ಒಬ್ಬ ಆಟಗಾರನಿಗೆ ಮೂರು ಪಂದ್ಯಗಳ ನಿಷೇಧವಾಯಿತು. ಹರ್ಭಜನ್ ಗೆ ಆಗ ಅನ್ಯಾಯವಾಗಿತ್ತು. ಎಲ್ಲರೂ ನಾವು ಸರಣಿಯನ್ನು ಅರ್ಧದಲ್ಲೇ ನಿಲ್ಲಿಸಿ ಮರಳಬೇಕು ಎಂದಿದ್ದರು.

ಆದರೆ ಒಂದು ವೇಳೆ ನಾವು ಹಾಗೆ ಮಾಡಿದ್ದರೆ ನಾವು ತಪ್ಪು ಮಾಡಿದ್ದಕ್ಕೇ ಹಾಗೆ ಮಾಡಿದೆವು ಎಂದುಕೊಳ್ಳುತ್ತಿದ್ದರು. ಆಗ ನನ್ನ ಅದೃಷ್ಟಕ್ಕೆ ತಂಡದಲ್ಲಿ ಸಾಕಷ್ಟು ಅನುಭವಿ, ಹಿರಿಯ ಆಟಗಾರರಿದ್ದರು. ಎಲ್ಲರೂ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದೆವು’ ಎಂದು ಕುಂಬ್ಳೆ ಸ್ಮರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ಮುಗಿಸಿ ಶೂಟಿಂಗ್ ಗೆ ಹಾಜರಾದ ಸೌರವ್ ಗಂಗೂಲಿ