Publish Date: Thu, 05 Dec 2019 (10:34 IST)
Updated Date: Thu, 05 Dec 2019 (10:35 IST)
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ ಉರುಳು ಇದೀಗ ಚಿತ್ರರಂಗದ ಗಣ್ಯರು, ನಟಿಮಣಿಯರಿಗೂ ಥಳುಕು ಹಾಕಿಕೊಳ್ಳುವ ಸಾಧ‍್ಯತೆಯಿದೆ.
ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಫ್ರಾಂಚೈಸಿ ಮಾಲಿಕರು ಏರ್ಪಡಿಸುತ್ತಿದ್ದ ಪಾರ್ಟಿಗಳಲ್ಲಿ ನಟಿಯರೂ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ಅವರನ್ನು ಬಳಸಿಕೊಂಡು ಬೆಟ್ಟಿಂಗ್ ನಡೆಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಪಾಂಥರ್ಸ್ ಮಾಲಿಕರು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಕೆಲವು ನಟಿಯರು ತಪ್ಪದೇ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ಇವರನ್ನೂ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.