Publish Date: Tue, 22 Feb 2022 (17:13 IST)
Updated Date: Tue, 22 Feb 2022 (17:15 IST)
ಮುಂಬೈ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ, ಮಾಜಿ ದಿಗ್ಗಜ ಯುವರಾಜ್ ಸಿಂಗ್ ಬರೆದ ಭಾವನಾತ್ಮಕ ಪತ್ರವೊಂದು ಈಗ ವೈರಲ್ ಆಗಿದೆ.
ಕೊಹ್ಲಿಗೆ ಪ್ಯೂಮಾ ಗೋಲ್ಡನ್ ಬೂಟ್ ಉಡುಗೊರೆಯಾಗಿ ನೀಡಿದ ಯುವಿ, ಜೊತೆಗೊಂದು ಭಾವನಾತ್ಮಕ ಪತ್ರ ಬರೆದಿದ್ದಾರೆ. ನಿನ್ನನ್ನು ಒಬ್ಬ ಸಾಮಾನ್ಯ ಆಟಗಾರನಾಗಿ ನೆಟ್ಸ್ ನಿಂದ ನೋಡಿದ್ದೇನೆ. ಈಗ ನೀನು ದಿಗ್ಗಜ ಕ್ರಿಕೆಟಿಗನಾಗಿ ಬೆಳೆದಿರುವೆ. ಹಲವರಿಗೆ ಸ್ಪೂರ್ತಿಯಾಗಿರುವೆ ಎಂದು ಹಾಡಿ ಹೊಗಳಿದ್ದಾರೆ.
ನೀನು ಒಬ್ಬ ಅತ್ಯುತ್ತಮ ಕ್ರಿಕೆಟಿಗ. ಜೊತೆಗೆ ಅತ್ಯುತ್ತಮ ನಾಯಕ. ನಿನ್ನೊಂದಿಗೆ ಗೆಳೆಯನಾಗಿ ಅನೇಕ ಸ್ಮರಣೀಯ ಕ್ಷಣಗಳನ್ನು ಕಳೆದಿರುವುದು ನನಗೆ ಹೆಮ್ಮೆ. ನೀನು ನನ್ನ ಪಾಲಿಗೆ ಯಾವತ್ತಿಗೂ ಅದೇ ಚೀಕು, ಆದರೆ ವಿಶ್ವದ ಪಾಲಿಗೆ ಕಿಂಗ್ ಕೊಹ್ಲಿ ಎಂದು ಯುವರಾಜ್ ಸಿಂಗ್ ಪತ್ರ ಬರೆದಿದ್ದಾರೆ.