Publish Date: Mon, 21 Feb 2022 (16:45 IST)
Updated Date: Mon, 21 Feb 2022 (16:46 IST)
ಕೋಲ್ಕೊತ್ತಾ: ಮುಂಬರುವ ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಇರುತ್ತಾರೆ, ತಂಡದ ಕಾಂಬಿನೇಷನ್ ಹೇಗಿರಲಿದೆ ಎಂಬುದು ಈಗಾಗಲೇ ಫಿಕ್ಸ್ ಆಗಿದೆ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ.
ನಾನು, ರೋಹಿತ್ ಮತ್ತು ಆಯ್ಕೆ ಸಮಿತಿಗೆ ಈಗಾಗಲೇ ಇದರ ಬಗ್ಗೆ ಒಂದು ಐಡಿಯಾ ಇದೆ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.
ನಮಗೆ ಟಿ20 ವಿಶ್ವಕಪ್ ಗೆ ತಂಡ ಹೇಗಿರಬೇಕು, ಕಾಂಬಿನೇಷನ್ ಹೇಗಿರಬೇಕು ಎಂಬುದರ ಬಗ್ಗೆ ಈಗಾಗಲೇ ಸ್ಪಷ್ಟತೆಯಿದೆ. ಅದನ್ನೇ ಕೊಂಚ ಪುನರ್ ರಚನೆ ಮಾಡುತ್ತಿದ್ದೇವಷ್ಟೇ. ಕೆಲವೊಂದು ಮಾರ್ಪಾಡುಗಳಾಗಬಹುದು. ಉತ್ತಮ ಪ್ರದರ್ಶನ ನೀಡುವ ಪ್ರತಿಯೊಬ್ಬರಿಗೂ ಅವಕಾಶ ಸಿಗಲಿದೆ ಎಂದು ದ್ರಾವಿಡ್ ಹೇಳಿದ್ದಾರೆ.