Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ ಟಿ20: ಸರಣಿ ಕ್ಲೀನ್ ಸ್ವೀಪ್ ಜೊತೆಗೆ ರೋಹಿತ್ ಶರ್ಮಾ ದಾಖಲೆ

ಭಾರತ-ವಿಂಡೀಸ್ ಟಿ20: ಸರಣಿ ಕ್ಲೀನ್ ಸ್ವೀಪ್ ಜೊತೆಗೆ ರೋಹಿತ್ ಶರ್ಮಾ ದಾಖಲೆ
ಕೋಲ್ಕೊತ್ತಾ , ಸೋಮವಾರ, 21 ಫೆಬ್ರವರಿ 2022 (08:40 IST)
ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯವನ್ನು 17 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದರೊಂದಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸ ದಾಖಲೆ ಮಾಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 65, ವೆಂಕಟೇಶ್ ಅಯ್ಯರ್ 35, ಇಶಾನ್ ಕಿಶನ್ 34 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ದಿಟ್ಟ ಉತ್ತರ ನೀಡಿತು. ನಿಕಲಸ್ ಪೂರನ್ 61, ರೋವ್ ಮೆನ್ ಪೊವೆಲ್ 25, ರೊಮಾರಿಯೋ ಶೆಫರ್ಡ್ 29 ರನ್ ಗಳಿಸಿ ಮಿಂಚಿದರು. ಕೊನೆಯ ಹಂತದಲ್ಲಿ ಹರ್ಷಲ್ ಪಟೇಲ್, ಶ್ರಾದ್ಧೂಲ್ ಠಾಕೂರ್, ರವಿ ಬಿಷ್ಣೋಯ್ ರನ್ ನಿಯಂತ್ರಿಸಿದ್ದರಿಂದ ವಿಂಡೀಸ್ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 17 ರನ್ ಗಳಿಂದ ಗೆದ್ದು ಸರಣಿ 3-0 ಅಂತರದಿಂದ ಟೀಂ ಇಂಡಿಯಾ ಪಾಲಾಯಿತು.

ನಿನ್ನೆಯ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಕ್ಕೆ ಪಂದ್ಯ ಶ್ರೇಷ್ಠ ಹಾಗೂ ಸರಣಿಯುದ್ದಕ್ಕೂ ಪ್ರಶ್ನಿಸಿದ್ದಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಸೂರ್ಯಕುಮಾರ್ ಯಾದವ್ ಪಾಲಾಯಿತು. ಇನ್ನು, ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಸತತವಾಗಿ ಅತೀ ಹೆಚ್ಚು ಪಂದ್ಯ ಗೆದ್ದ ದಾಖಲೆ ಮಾಡಿದರು. 2019 ರಿಂದ ಇಲ್ಲಿಯವರೆಗೆ ರೋಹಿತ್ ನಾಯಕರಾಗಿ ಸತತವಾಗಿ 9 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ-ರೈಲ್ವೇಸ್ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯ