Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ ಅಂತಿಮ ಟಿ20: ಅಜೇಯರಾಗುಳಿಯುವತ್ತ ರೋಹಿತ್ ಚಿತ್ತ

ಭಾರತ-ವಿಂಡೀಸ್ ಅಂತಿಮ ಟಿ20: ಅಜೇಯರಾಗುಳಿಯುವತ್ತ ರೋಹಿತ್ ಚಿತ್ತ
ಕೋಲ್ಕೊತ್ತಾ , ಭಾನುವಾರ, 20 ಫೆಬ್ರವರಿ 2022 (08:40 IST)
ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ಇಂದು ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.

ಈಗಾಗಲೇ ಎರಡೂ ಪಂದ್ಯಗಳನ್ನು ಗೆದ್ದು ಸರಣಿ ಕೈ ವಶ ಮಾಡಿಕೊಂಡಿರುವ ರೋಹಿತ್ ಪಡೆಗೆ ಈ ಪಂದ್ಯವನ್ನೂ ಗೆದ್ದು ಏಕದಿನದ ಬಳಿಕ ಟಿ20 ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡುವ ಗುರಿಯಿದೆ. ಈ ಪಂದ್ಯಕ್ಕೆ ಕೊಹ್ಲಿ, ರಿಷಬ್ ಪಂತ್ ಅಲಭ್ಯರಾಗಿರಲಿದ್ದಾರೆ. ರಿಷಬ್ ಸ್ಥಾನದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಲಿದ್ದಾರೆ.

ಆದರೆ ವಿಂಡೀಸ್ ಕಳೆದ ಪಂದ್ಯದಲ್ಲಿ ತೋರಿದ ಪ್ರತಿರೋಧ ನೋಡಿದರೆ ಗೆಲುವು ಸುಲಭವಲ್ಲ. ಟಿ20 ಕ್ರಿಕೆಟ್ ನಲ್ಲಿ ವಿಂಡೀಸ್ ಯಾವಾಗ ಬೇಕಾದರೂ ತಿರುಗಿಬೀಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ರೋಹಿತ್ ಪಡೆ ಈ ಪಂದ್ಯವನ್ನು ಹಗುರವಾಗಿ ಕಾಣುವಂತಿಲ್ಲ. ಈ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಟಿ20 ಸರಣಿಗೆ ಟೀಂ ಇಂಡಿಯಾ: ಕೊಹ್ಲಿ, ರಿಷಬ್ ಔಟ್, ಜಡೇಜಾ ಕಮ್ ಬ್ಯಾಕ್