Publish Date: Sat, 19 Feb 2022 (08:40 IST)
Updated Date: Sat, 19 Feb 2022 (09:18 IST)
ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ದ್ವಿತೀಯ ಪಂದ್ಯವನ್ನು ರೋಚಕವಾಗಿ 8 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕೈ ವಶ ಮಾಡಿಕೊಂಡಿದೆ.
ಭಾರತ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ವಿರಾಟ್ ಕೊಹ್ಲಿ 52, ರಿಷಬ್ ಪಂತ್ 52, ವೆಂಕಟೇಶ್ ಅಯ್ಯರ್ 33 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ಗೆ ರೋವ್ ಮೆನ್ ಪೊವೆಲ್, ನಿಕೊಲಸ್ ಪೂರನ್ ಉತ್ತಮ ಜೊತೆಯಾಟ ನೀಡಿದದರು. ಈ ಜೋಡಿ ಭಾರತದಿಂದ ಜಯ ಕಸಿದುಕೊಳ್ಳುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೊನೆಯಲ್ಲಿ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೌಲಿಂಗ್ ನಡೆಸಿ ಎದುರಾಳಿಗಳನ್ನು ಕಟ್ಟಿಹಾಕಿದರು. ಪೂರನ್ 62 ರನ್ ಗೆ ಔಟಾದರೆ ಪೊವೆಲ್ ಅಜೇಯವಾಗಿ 68 ರನ್ ಗಳಿಸಿದರು. ಇದರೊಂದಿಗೆ ವಿಂಡೀಸ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಲಷ್ಟೇ ಶಕ್ತವಾಯಿತು.