Publish Date: Fri, 18 Feb 2022 (08:40 IST)
Updated Date: Fri, 18 Feb 2022 (09:03 IST)
ಕೋಲ್ಕೊತ್ತಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ದ್ವಿತೀಯ ಪಂದ್ಯ ಇಂದು ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.
ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವ ಟೀಂ ಇಂಡಿಯಾಗೆ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ಗೆಲ್ಲುವ ಕನಸು. ರೋಹಿತ್ ಶರ್ಮಾ ಪಡೆ ಈಗಾಗಲೇ ಏಕದಿನ ಸರಣಿ ಗೆದ್ದಿದೆ. ಇದೀಗ ರೋಹಿತ್ ನಾಯಕತ್ವದಲ್ಲಿ ಟಿ20 ಸರಣಿಯನ್ನೂ ಗೆದ್ದರೆ ಅದು ನೂತನ ನಾಯಕನಿಗೆ ಗರಿಮೆಯಾಗಲಿದೆ.
ಭಾರತ ಇದೀಗ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಸದೃಢವಾಗಿದೆ. ಹಾಗಿದ್ದರೂ ಬ್ಯಾಟಿಗರು ಎಲ್ಲಾ ಸರಿಯಾಗಿದೆ ಎಂದುಕೊಳ್ಳುವಾಗ ದಿಡೀರ್ ಕುಸಿತಕ್ಕೊಳಗಾಗುವ ಚಾಳಿ ಬಿಟ್ಟಿಲ್ಲ. ಆದರೂ ಯುವ ಕ್ರಿಕೆಟಿಗರು ಮಿಂಚುತ್ತಿರುವುದು ಭಾರತಕ್ಕೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.