Publish Date: Sat, 19 Feb 2022 (09:00 IST)
Updated Date: Sat, 19 Feb 2022 (09:25 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಬಳಿಕ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಇನ್ನೂ ತಂಡದ ಆಯ್ಕೆ ನಡೆದಿಲ್ಲ.
ಮೂಲಗಳ ಪ್ರಕಾರ ಶಿಖರ್ ಧವನ್ ರಂತಹ ಹಿರಿಯ ಕ್ರಿಕೆಟಿಗರಿಗೆ ಈ ಸರಣಿಯಲ್ಲಿ ಕೊನೆಯ ಅವಕಾಶ ನೀಡುವ ಸಾಧ‍್ಯತೆಯಿದೆ. ಇದಾದ ಬಳಿಕ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರು ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾಗಬಹುದು ಎನ್ನಲಾಗಿದೆ.
ಶಿಖರ್ ಧವನ್, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಟಿ20 ಕ್ರಿಕೆಟ್ ನಿಂದ ದೂರ ಸರಿಯುವ ಸಾಧ‍್ಯತೆಯಿದೆ. ಈಗಾಗಲೇ ಯುವ ಕ್ರಿಕೆಟಿಗರ ಪ್ರಭಾವದಿಂದ ಈ ಕ್ರಿಕೆಟಿಗರಿಗೆ ಟಿ20 ಪಂದ್ಯಗಳಲ್ಲಿ ಅವಕಾಶವೇ ಸಿಗುತ್ತಿಲ್ಲ. ಐಪಿಎಲ್ ನಿಂದಾಗಿ ಮತ್ತಷ್ಟು ಹೊಸ ಪ್ರತಿಭೆಗಳು ತಂಡಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವರು ಟಿ20 ಪಂದ್ಯವಾಡುವ ಸಾಧ‍್ಯತೆ ಕ್ಷೀಣವಾಗಿದೆ.