ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದ ಬೇಸರದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕೋಚ್ ದ್ರಾವಿಡ್ ಮುಂದಿನ ದಿನಗಳಲ್ಲಿ ನೀನು ತಂಡದ ಭಾಗವಾಗಿರಲ್ಲ ಎಂದಿದ್ದೇ ಕಾರಣ ಎಂದು ಸಹಾ ಹೇಳಿಕೊಂಡಿದ್ದಾರೆ. ನಿನಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ಆಯ್ಕೆಗಾರರು ಯುವ ವಿಕೆಟ್ ಕೀಪರ್ ಗಳನ್ನು ಹುಡುಕಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿನಗೆ ಅವಕಾಶ ಸಿಗುವ ಸಾಧ‍್ಯತೆಯಿಲ್ಲ ಎಂದು ದ್ರಾವಿಡ್ ಹೇಳಿದ್ದರು. ಹೀಗಾಗಿ ನೀನು ನಿವೃತ್ತಿ ಬಗ್ಗೆ ಚಿಂತಿಸುವುದು ಒಳ್ಳೆಯದು ಎಂದು ದ್ರಾವಿಡ್ ಹೇಳಿದ್ದರು ಎಂದು ಸಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದುವರೆಗೆ ಕ್ಲೀನ್ ಇಮೇಜ್ ವ್ಯಕ್ತಿತ್ವ ಹೊಂದಿದ್ದ ದ್ರಾವಿಡ್ ಗೆ ಸಹಾ ಅವರ ಈ ಆರೋಪ ನಿಜಕ್ಕೂಕಪ್ಪು ಚುಕ್ಕೆಯಾಗಲಿದೆ. ನಾನು ಹಿಂದೆ ಕಾನ್ಪುರದಲ್ಲಿ ನೋವು ನಿವಾರಕ ಸೇವಿಸಿ ಅಜೇಯ 61 ರನ್ ಸಿಡಿಸಿ ತಂಡವನ್ನು ಕಾಪಾಡಿದಾಗ ಗಂಗೂಲಿ ವ್ಯಾಟ್ಸಪ್ ಸಂದೇಶ ಕಳುಹಿಸಿ ನಾನು ಇರುವವರೆಗೂ ನೀನು ತಂಡದಲ್ಲಿರುತ್ತಿ ಎಂದಿದ್ದರು. ಆದರೆ ಈಗ ಎಲ್ಲವೂ ಬದಲಾಗಿದ್ದಯ ಯಾಕೆ ಎಂಬುದು ನನಗೆ ಅಚ್ಚರಿಯಾಗುತ್ತಿದೆ ಎಂದು ಗಂಗೂಲಿ-ದ್ರಾವಿಡ್ ವಿರುದ್ಧ ಸಹಾ ಕಿಡ ಕಾರಿದ್ದಾರೆ. ಅವರ ಈ ಹೇಳಿಕೆ ಈಗ ಸಂಚಲನ ಮೂಡಿಸಿದೆ.