Publish Date: Mon, 21 Feb 2022 (09:00 IST)
Updated Date: Mon, 21 Feb 2022 (09:20 IST)
ನವದೆಹಲಿ: ಪತ್ನಿ ಆಯೆಷಾರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ ಬಳಿಕ ಶಿಖರ್ ಧವನ್ ತಮ್ಮ ಪುತ್ರ ಝೊರಾವರ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು.
ಈ ಬಗ್ಗೆ ಆಗಾಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗನ ಜೊತೆಗಿನ ವಿಡಿಯೋ ಕಾಲ್, ಹಳೆಯ ಫೋಟೋಗಳನ್ನು ಹಂಚಿಕೊಂಡು ಖುಷಿಪಡುತ್ತಿದ್ದರು.
ಆದರೆ ಈಗ ಧವನ್ ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾಗಿದ್ದಾರೆ. ವಿಮಾನ ನಿಲ್ದಾಣಕ್ಕೆ ಮಗ ಝೊರಾವರ್ ಬಂದಾಗ ಓಡಿ ಹೋಗಿ ಧವನ್ ಮುದ್ದಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರೂ ಭಾವುಕರಾಗಿದ್ದಾರೆ.