Publish Date: Tue, 22 Feb 2022 (17:06 IST)
Updated Date: Tue, 22 Feb 2022 (17:07 IST)
ಮುಂಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರಿಗೆ ವಿದೇಶೀ ಲೀಗ್ ನಲ್ಲಾದರೂ ಆಡಲು ಅವಕಾಶ ಕೊಡಿ ಎಂದು ಬಿಸಿಸಿಐಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಸುರೇಶ್ ರೈನಾ ಮನವಿ ಮಾಡಿದ್ದಾರೆ.
ವಿಡಿಯೋ ಮೂಲಕ ಬಿಸಿಸಿಐಗೆ ಮನವಿ ಮಾಡಿರುವ ರೈನಾ ತಮ್ಮಂತೇ ರಾಷ್ಟ್ರೀಯ ತಂಡದಲ್ಲಿ ಆಡದ ಐಪಿಎಲ್ ನಲ್ಲೂ ಅವಕಾಶ ಸಿಗದ ಆಟಗಾರರಿಗೆ ಬಿಗ್ ಬ್ಯಾಷ್ ನಂತಹ ವಿದೇಶೀ ಲೀಗ್ ನಲ್ಲಿ ಆಡಲು ಬಿಸಿಸಿಐ ನಿರಾಪೇಕ್ಷಣಾ ಪತ್ರ ನೀಡಬೇಕು ಎಂದಿದ್ದಾರೆ.
ವಿದೇಶೀ ಆಟಗಾರರು ಐಪಿಎಲ್ ಗೆ ಬಂದು ಆಡುತ್ತಾರೆ. ಅದೇ ರೀತಿ ನಮಗೂ ವಿದೇಶೀ ಲೀಗ್ ನಲ್ಲಿ ಭಾಗವಹಿಸಲು ಅವಕಾಶ ನೀಡಿ. ಎಲ್ಲರೂ ನಮ್ಮನ್ನು ನಿರ್ಲಕ್ಷಿಸಿದರೆ ನಮಗೆ ಪ್ಲಾನ್ ಬಿ ಇಲ್ಲ. ನಮಗೂ ಒಂದು ಅವಕಾಶ ಕೊಡಿ ಎಂದು ರೈನಾ ಬೇಡಿಕೊಂಡಿದ್ದಾರೆ.