Publish Date: Fri, 21 Apr 2023 (07:00 IST)
Updated Date: Fri, 21 Apr 2023 (07:10 IST)
ನವದೆಹಲಿ: ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಫೋಟೋವೊಂದು ಅವರಿಗೇ ಮುಳುವಾಗಿದೆ.
ಚಾಹಲ್ ತಮ್ಮ ಐಪಿಎಲ್ ಸಹ ಆಟಗಾರರ ಕುಟುಂಬದವರ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫೋಟೋ ಪ್ರಕಟಿಸಿದ್ದಾರೆ. ಇದೇ ಪಾರ್ಟಿಯಲ್ಲಿ ರಾಜಸ್ಥಾನ್ ತಂಡದ ಸಹ ಆಟಗಾರ ಜೋಸ್ ಬಟ್ಲರ್ ಗೆ ಪ್ರಪೋಸ್ ಮಾಡುವ ತಮಾಷೆಯ ಗಳಿಗೆಯನ್ನು ಪ್ರಕಟಿಸಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಪಾರ್ಟಿ ಫೋಟೋಗಳಲ್ಲಿ ಚಾಹಲ್ ಪತ್ನಿ ಧನಶ್ರೀ ಇರಲಿಲ್ಲ. ಧನಶ್ರೀ ಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆಗೆ ಪಾರ್ಟಿ ಮಾಡಿದ ಫೋಟೋ ವೈರಲ್ ಆಗಿತ್ತು. ಚಾಹಲ್-ಧನಶ್ರೀ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಯೂ ಇತ್ತು. ಇದನ್ನು ಸ್ವತಃ ದಂಪತಿ ಅಲ್ಲಗಳೆದಿದ್ದೂ ಇದೆ. ಆದರೆ ಶ್ರೇಯಸ್ ಜೊತೆ ಪಾರ್ಟಿ ಮಾಡುವ ಧನಶ್ರೀ ಚಾಹಲ್ ಪಾರ್ಟಿಯಲ್ಲಿ ಇಲ್ಲ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.