Publish Date: Thu, 20 Apr 2023 (19:17 IST)
Updated Date: Thu, 20 Apr 2023 (19:18 IST)
ಮೊಹಾಲಿ: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 24 ರನ್ ಗಳಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಇಂದು ಫಾ ಡು ಪ್ಲೆಸಿಸ್ ಗಾಯಗೊಂಡಿದ್ದರಿಂದ ಕೊಹ್ಲಿ ನಾಯಕತ್ವದಲ್ಲಿ ಆರ್ ಸಿಬಿ ಕಣಕ್ಕಿಳಿಯಿತು. ಆದರೆ ಫಾ ಡು ಪ್ಲೆಸಿಸ್ ಬ್ಯಾಟಿಂಗ್ ಮಾತ್ರ ಮಾಡಿದರು. 56 ಎಸೆತ ಎದುರಿಸಿದ ಅವರು 84 ರನ್ ಗಳಿಸಿದರು. ಕೊಹ್ಲಿ 59 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಪಂಜಾಬ್ 18.2 ಓವರ್ ಗಳಲ್ಲಿ 150 ರನ್ ಗಳಿಗೆ ಆಲೌಟ್ ಆಯಿತು. ಪ್ರಭಿಸ್ಮರನ್ ಸಿಂಗ್ 46, ಜಿತೇಶ್ ಶರ್ಮಾ ಹೋರಾಟದ 41 ರನ್ ಗಳಿಸಿದರು. ಜಿತೇಶ್ ಕ್ರೀಸ್ ನಲ್ಲಿರುವವರೆಗೂ ಪಂಜಾಬ್ ಗೆ ಗೆಲುವಿನ ಆಸೆಯಿತ್ತು. ಆದರೆ ಅವರು ಔಟಾದೊಡನೇ ಪಂಜಾಬ್ ಸೋಲು ಖಚಿತವಾಯಿತು. ಆರ್ ಸಿಬಿ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಬಳಿಸಿದರು.