Publish Date: Thu, 20 Apr 2023 (06:40 IST)
Updated Date: Thu, 20 Apr 2023 (07:04 IST)
ಮೊಹಾಲಿ: ಐಪಿಎಲ್ 2023 ರಲ್ಲಿ ಅಗ್ರ 5 ರೊಳಗೆ ಸ್ಥಾನ ಪಡೆಯಲೇಬೇಕೆಂಬ ಒತ್ತಡಕ್ಕೆ ಸಿಲುಕಿರುವ ಆರ್ ಸಿಬಿ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆ ಪಂದ್ಯವಾಡಲಿದೆ.
ಇಂದು ಎರಡು ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಆರ್ ಸಿಬಿ-ಪಂಜಾಬ್ ಮುಖಾಮುಖಿಯಾಗಲಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಕೊನೆಯ ಹಂತದಲ್ಲಿ ಸೋತಿತ್ತು. ಐದು ಪಂದ್ಯಗಳ ಪೈಕಿ ಆರ್ ಸಿಬಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಕಂಡಿದೆ. ಅದೂ ತವರಲ್ಲಿ ಮಾತ್ರ. ಆರ್ ಸಿಬಿ ಬಿಗ್ ಥ್ರೀ ಬ್ಯಾಟಿಗರು ಭರ್ಜರಿ ಫಾರ್ಮ್ ನಲ್ಲಿದ್ದರೂ ಅದೃಷ್ಟ ಕೈ ಹಿಡಿಯುತ್ತಿಲ್ಲ ಎನ್ನುವುದು ವಿಪರ್ಯಾಸ.
ಇನ್ನೊಂದೆಡೆ ಶಿಖರ್ ಧವನ್ ನೇತೃತ್ವದ ಪಂಜಾಬ್ ಎರಡು ಸತತ ಸೋಲುಗಳ ನಂತರ ಕಳೆದ ಪಂದ್ಯವನ್ನು ಗೆದ್ದಿತ್ತು. ಪಂಜಾಬ್ 5 ಪಂದ್ಯಗಳಿಂದ 2 ಸೋಲು ಕಂಡಿದೆ. ಸದ್ಯಕ್ಕೆ ಐದನೇ ಸ್ಥಾನದಲ್ಲಿರುವ ಪಂಜಾಬ್ ಗೆ ಅಗ್ರ 5 ರೊಳಗೆ ಸ್ಥಾನ ಉಳಿಸಿಕೊಳ್ಳಲು ಗೆಲುವು ಅನಿವಾರ್ಯ. ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯುವುದು.