Select Your Language

Notifications

webdunia
webdunia
webdunia
webdunia

ವಮಿಕಾಳನ್ನು ಡೇಟಿಂಗ್ ಕರೆದೊಯ್ಯಲು ಕೊಹ್ಲಿಗೆ ಮನವಿ ಮಾಡಿದ ಬಾಲಕ!

ವಮಿಕಾಳನ್ನು ಡೇಟಿಂಗ್ ಕರೆದೊಯ್ಯಲು ಕೊಹ್ಲಿಗೆ ಮನವಿ ಮಾಡಿದ ಬಾಲಕ!
ಬೆಂಗಳೂರು , ಬುಧವಾರ, 19 ಏಪ್ರಿಲ್ 2023 (07:20 IST)
Photo Courtesy: Twitter
ಬೆಂಗಳೂರು: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದುವರೆಗೆ ತಮ್ಮ ಮಗಳ ಫೋಟೋ, ವಿಡಿಯೋವನ್ನು ಅಧಿಕೃತವಾಗಿ ಎಲ್ಲೂ ಬಿಟ್ಟುಕೊಟ್ಟಿಲ್ಲ.

ಮೊನ್ನೆಯಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಪಂದ್ಯ ನಡೆದಿತ್ತು. ಈ ಪಂದ್ಯದ  ವೇಳೆ ಆರ್ ಸಿಬಿ ಆಟಗಾರ ಕೊಹ್ಲಿಗೆ ಬಾಲಕ ಅಭಿಮಾನಿಯೊಬ್ಬ ವಿಶಿಷ್ಟ ಮನವಿ ಸಲ್ಲಿಸಿದ್ದಾನೆ.

ಕೊಹ್ಲಿ ಪುತ್ರಿ ವಮಿಕಾಳನ್ನು ಡೇಟಿಂಗ್ ಗೆ ಕರೆದೊಯ್ಯಲು ಅನುಮತಿ ಕೊಡಿ ಎಂದು ಪ್ಲೇಕಾರ್ಡ್ ಹಿಡಿದು ನಿಂತಿದ್ದು ಎಲ್ಲರ ಗಮನಸೆಳೆದಿದೆ. ಆದರೆ ಇಷ್ಟು ಚಿಕ್ಕ ಬಾಲಕ ಈ ರೀತಿ ಪ್ಲೇ ಕಾರ್ಡ್ ಬರೆಯಲು ಸಾಧ್ಯವೇ ಇಲ್ಲ. ಹೀಗಾಗಿ ಈತನ ಪೋಷಕರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಏನೂ ಅರಿಯದ ಮುಗ್ಧ ಬಾಲಕನ ಕೈಯಲ್ಲಿ ಈ ರೀತಿಯ ವಿಚಾರ ತುಂಬುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಲಕ್ನೋ ಜೈಂಟ್ಸ್ ಗಳಿಗೆ ರಾಜಸ್ಥಾನ್ ರಾಜರ ಸವಾಲು