Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಮುಂಬೈಗೆ ಹ್ಯಾಟ್ರಿಕ್ ಗೆಲುವು

ಐಪಿಎಲ್ 2023: ಮುಂಬೈಗೆ ಹ್ಯಾಟ್ರಿಕ್ ಗೆಲುವು
ಹೈದರಾಬಾದ್ , ಬುಧವಾರ, 19 ಏಪ್ರಿಲ್ 2023 (06:30 IST)
Photo Courtesy: Twitter
ಹೈದರಾಬಾದ್: ಐಪಿಎಲ್ 2023 ರಲ್ಲಿ ನಿಧಾನವಾಗಿ ಮುಂಬೈ ಇಂಡಿಯನ್ಸ್ ಟ್ರ್ಯಾಕ್ ಗೆ ಮರಳುತ್ತಿದೆ. ಇದೀಗ ಸತತ ಮೂರನೇ ಗೆಲುವು ದಾಖಲಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 14 ರನ್ ಗಳಿಂದ ಮುಂಬೈ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದರು. ಗ್ರೀನ್ ಅಜೇಯ 64, ಇಶಾನ್ ಕಿಶನ್ 38, ತಿಲಕ್ ವರ್ಮ 37 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 19.5 ಓವರ್ ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ 48 ರನ್ ಗಳಿಸಿದರು.  ಮುಂಬೈ ಪರ ಪಿಯೂಷ್ ಚಾವ್ಲಾ, ರಿಲೇ ಮೆರಿಡಿತ್, ಜೇಸನ್ ತಲಾ 2 ವಿಕೆಟ್ ಕಬಳಿಸಿದರು. ಅರ್ಜುನ್ ತೆಂಡುಲ್ಕರ್ ಐಪಿಎಲ್ ನ ಮೊದಲ ವಿಕೆಟ್ ಸಂಪಾದಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಗೂಲಿ-ಕೊಹ್ಲಿ ವಾರ್: ಸೋಷಿಯಲ್ ಮೀಡಿಯಾದಲ್ಲಿ ಗಂಗೂಲಿ ಟಿಕ್ ಫಾರ್ ಟ್ಯಾಕ್!