ನವದೆಹಲಿ: ಈ ಐಪಿಎಲ್ ಕೂಟದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ತಂಡವೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಎನ್ನಬಹುದು.
									
			
			 
 			
 
 			
			                     
							
							
			        							
								
																	ಇದುವರೆಗೆ ಆಡಿದ ಐದೂ ಪಂದ್ಯಗಳನ್ನೂ ಡೆಲ್ಲಿ ಸೋತಿದೆ. ಇಂದು ಆರನೇ ಪಂದ್ಯದಲ್ಲಾದರೂ ಗೆಲುವು ಸಿಗಬಹುದು ಎಂಬ ವಿಶ್ವಾಸದಿಂದ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡಲಿದೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿರುವ ಡೇವಿಡ್ ವಾರ್ನರ್ ತಂಡಕ್ಕೆ ಮೊದಲ ಜಯ ಕೊಡಿಸುವಲ್ಲಿ ವಿಫಲರಾಗಿರುವುದು ದುರಾದೃಷ್ಟವೇ ಸರಿ.
									
										
								
																	ಇನ್ನೊಂದೆಡೆ ಕೆಕೆಆರ್ ಬಿಗ್ ಹಿಟ್ಟರ್ ಗಳ ಬಲದಲ್ಲಿ ಮೆರೆಯುತ್ತಿದೆ. ವೆಂಕಟೇಶ್ ಅಯ್ಯರ್ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದರೂ ತಂಡ ಸೋತಿದ್ದು ದುರಾದೃಷ್ಟ. ಹಾಗಿದ್ದರೂ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ 2 ಗೆಲುವು ಕಂಡಿದೆ. ಇಂದಿನ ಈ ಎರಡನೇ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.