Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಚೆನ್ನೈಗೆ ನೆರೆಯ ಹೈದರಾಬಾದ್ ಸವಾಲು

ಐಪಿಎಲ್ 2023: ಚೆನ್ನೈಗೆ ನೆರೆಯ ಹೈದರಾಬಾದ್ ಸವಾಲು
ಚೆನ್ನೈ , ಶುಕ್ರವಾರ, 21 ಏಪ್ರಿಲ್ 2023 (06:50 IST)
ಚೆನ್ನೈ: ಐಪಿಎಲ್ 2023 ರ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ನೆರೆಯ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

ಚೆನ್ನೈ ಇದುವರೆಗೆ ನಡೆದ ಐದು ಪಂದ್ಯಗಳ ಪೈಕಿ ಎರಡು ಸೋಲು ಮೂರು ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಹೀಗಾಗಿ ಧೋನಿ ಪಡೆ ಉತ್ಸಾಹ ಉನ್ನತ ಮಟ್ಟದಲ್ಲಿದೆ.

ಇನ್ನೊಂದೆಡೆ ಹೈದರಾಬಾದ್ ಐದು ಪಂದ್ಯಗಳ ಪೈಕಿ ಎರಡು ಮಾತ್ರ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲೂ ಹೈದರಾಬಾದ್ ಸೋಲು ಅನುಭವಿಸಿತ್ತು. ಹೀಗಾಗಿ ಆಡನ್ ಮಾರ್ಕರನ್ ಪಡೆ ಗೆಲ್ಲುವ ಒತ್ತಡದಲ್ಲಿದೆ.  ಈ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಡೆಲ್ಲಿ ಕ್ಯಾಪಿಟಲ್ಸ್ ಗೆ ಕೊನೆಗೂ ಗೆಲುವಿನ ಸಮಾಧಾನ