Select Your Language

Notifications

webdunia
webdunia
webdunia
webdunia

ಭಾರತ-ಐರ್ಲೆಂಡ್ ಟಿ20: ಮತ್ತೆ ಕೈ ಕೊಟ್ಟ ತಿಲಕ್ ವರ್ಮ, ಜೈಸ್ವಾಲ್

ಭಾರತ-ಐರ್ಲೆಂಡ್ ಟಿ20: ಮತ್ತೆ ಕೈ ಕೊಟ್ಟ ತಿಲಕ್ ವರ್ಮ, ಜೈಸ್ವಾಲ್
ಡುಬ್ಲಿನ್ , ಭಾನುವಾರ, 20 ಆಗಸ್ಟ್ 2023 (20:45 IST)
ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು ಇತ್ತೀಚೆಗಿನ ವರದಿ ಬಂದಾಗ 13 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ.

ಋತುರಾಜ್ ಗಾಯಕ್ ವಾಡ್ 45, ರಿಂಕು ಸಿಂಗ್ 3 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಗಾಯಕ್ ವಾಡ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತೆ ವಿಫಲರಾಗಿದ್ದು 18 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ದ ತಿಲಕ್ ವರ್ಮ ಈ ಪಂದ್ಯದಲ್ಲಿ 1 ರನ್ ಗೆ ಸೀಮಿತವಾದರು.

ಆದರೆ ಸಂಜು ಸ್ಯಾಮ್ಸನ್ 26 ಎಸೆತಗಳಿಂದ 1 ಸಿಕ್ಸರ್ ಸಹಿತ 40 ರನ್ ಚಚ್ಚಿ ಔಟಾದರು.  ಇಂದು ಟಾಸ್ ಗೆದ್ದ ಐರ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಐರ್ಲೆಂಡ್ ದ್ವಿತೀಯ ಟಿ20 ಪಂದ್ಯಕ್ಕೂ ಮಳೆ ಕಾಟವಿರುತ್ತಾ?