ಮುಂಬೈ: ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಈಗ ಮತ್ತೆ ತಮ್ಮ ಹಳೆಯ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ತೆರಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಕಳೆದ ಋತುವಿನಲ್ಲಿ ಲಕ್ನೋ ತಂಡದ ಮೆಂಟರ್ ಆಗಿ ಗಂಭೀರ್ ಅನೇಕ ವಿವಾದಗಳಿಗೆ ಗುರಿಯಾಗಿದ್ದರು. ಕೊಹ್ಲಿ ಜೊತೆಗಿನ ವಾಗ್ವಾದ ಇದರಲ್ಲಿ ಪ್ರಮುಖವಾಗಿತ್ತು. ಈ ಕಾರಣಕ್ಕೆ ಲಕ್ನೋ ಮ್ಯಾನೇಜೆಮೆಂಟ್ ಗಂಭೀರ್ ರನ್ನು ಮುಂದಿನ ಋತುವಿಗೆ ತಂಡದಲ್ಲಿ ಉಳಿಸಿಕೊಳ್ಳುವುದು ಅನುಮಾನ ಎನ್ನಲಾಗಿತ್ತು.
ಆದರೆ ಈಗ ಸ್ವತಃ ಗಂಭೀರ್ ಲಕ್ನೋ ತಂಡದಿಂದ ಹೊರಬರಲು ಚಿಂತನೆ ನಡೆಸಿದ್ದಾರಂತೆ. ಈಗಾಗಲೇ ಅವರು ಈ ಹಿಂದೆ ನಾಯಕರಾಗಿದ್ದ ಕೆಕೆಆರ್ ತಂಡದ ಜೊತೆ ಮಾತುಕತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಮಾತುಕತೆ ಫಲಪ್ರದವಾದರೆ ಮುಂದಿನ ಋತುವಿನಿಂದ ಮತ್ತೆ ಅವರು ಕೆಕೆಆರ್ ತಂಡದಲ್ಲಿರಲಿದ್ದಾರೆ.